Heeg Doora Lyrical Song – 99 Movie

Heeg Doora Song Lyrics

ಸೂರ್ಯನೇ..
ಸುಮ್ಮನೆ..
ಆಗಸವ ತೊರೆದರೆ..
ನೋಡು ಭೂಮಿಯ ಅನಾಥ
ನಟ್ಟ ನಡುವೆ, ಬಿಟ್ಟು ಹೊರಟೆ
ಬಡಪಾಯಿ ಜೀವವನು..
ಎಂಥ ನೋವ ಸಮೇತ!

ಹೀಗೆ ದೂರ, ಹೋಗುವ ಮುನ್ನ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ!

ಕಾಲುದಾರಿ..
ಸಾಲು ದೀಪ..
ಕೇಳುತಾವೆ, ಎಲ್ಲಿ ನೀನು?
ಮಳೆ ಹನಿಯ ಚಿಟ ಪಟ..
ನಿನ್ನ ನೆನಪ ಪುಟ ಪುಟ..

ಹೀಗೆ ದೂರ, ಹೋಗುವ ಮುನ್ನ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..

ಎಲ್ಲಿಯೇ, ಇರಲಿ ಖುಷಿಯಗಿರು..
ಕಾಡಲಿ, ನೆನಪು ಒಂದ್ ಚೂರು..
ಉಳಿಸಿರುವೆ ಹೃದಯಕೆ..
ಕಂಬನಿಯ ಸ್ಮರಣಿಕೆ..

ಹೀಗೆ ದೂರ, ಹೋಗುವ ಮುನ್ನ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ..!

Also, Read More:

Leave a Reply

Your email address will not be published.